ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ


ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿಯು (ಸ್ವೀಡನ್‌ನ ಭಾಷೆ: Nobelpriset i litteratur) ೧೯೦೧ರಿಂದ, ಆಲ್‌ಫ್ರೆಡ್ ನೋಬೆಲ್‌ರ ಉಯಿಲಿನಲ್ಲಿರುವ ಶಬ್ದಗಳಲ್ಲಿ ಹೇಳುವುದಾದರೆ, "ಸಾಹಿತ್ಯದ ಕ್ಷೇತ್ರದಲ್ಲಿ ಒಂದು ಧ್ಯೇಯಪರ ಮಾರ್ಗದಲ್ಲಿ ಅತ್ಯುತ್ತಮ ಗ್ರಂಥವನ್ನು" ಸೃಷ್ಟಿಸಿದ ಯಾವುದೇ ದೇಶದ ಒಬ್ಬ ಲೇಖಕನಿಗೆ ವಾರ್ಷಿಕವಾಗಿ ನೀಡಲಾಗುತ್ತದೆ (ಮೂಲ ಸ್ವೀಡನ್‌ನ ಭಾಷೆ: den som inom litteraturen har producerat det utmärktaste i idealisk riktning). ಕೆಲವೊಮ್ಮೆ ಪ್ರತ್ಯೇಕ ಕೃತಿಗಳನ್ನೂ ಉಲ್ಲೇಖಿಸಲಾಗುತ್ತದಾದರೂ, ಈ ಸಂಬಂಧದಲ್ಲಿ "ಗ್ರಂಥ" ಸಮಗ್ರವಾಗಿ ಒಬ್ಬ ಲೇಖಕನ ಕೃತಿಯನ್ನು ನಿರ್ದೇಶಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ವರ್ಷದಲ್ಲಿ ಯಾರು, ಯಾರಾದರೂ ಇದ್ದರೆ, ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆಂಬುದನ್ನು ಸ್ವೀಡನ್‌ನ ಅಕಾಡೆಮಿಯು ನಿರ್ಧರಿಸುತ್ತದೆ ಮತ್ತು ಅಕ್ಟೋಬರ್ ತಿಂಗಳ ಆರಂಭದಲ್ಲಿ ಆಯ್ಕೆಮಾಡಲಾದ ಪ್ರಶಸ್ತಿಗ್ರಾಹಕನ ಹೆಸರನ್ನು ಘೋಷಿಸುತ್ತದೆ.

Other Languages
беларуская (тарашкевіца)‎: Нобэлеўская прэмія ў галіне літаратуры
Mìng-dĕ̤ng-ngṳ̄: Nobel Ùng-hŏk Ciōng
한국어: 노벨 문학상
Lëtzebuergesch: Nobelpräis fir Literatur
srpskohrvatski / српскохрватски: Nobelova nagrada za književnost
Tiếng Việt: Giải Nobel Văn học