ಸಾವಯವ ಬೇಸಾಯ

13-09-01-kochtreffen-wien-RalfR-02.jpg

ಬೆಳೆಯ ಆವರ್ತನೆ, ಹಸಿರು ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ಕೀಟಗಳ ನಿಯಂತ್ರಣ ವನ್ನು ಅವಲಂಬಿಸಿರುವ ಸಾವಯವ ಬೇಸಾಯವು ಮಣ್ಣಿನ ತಯಾರಿಕೆಯ ಸಾಮರ್ಥ್ಯವನ್ನು ಸರಿದೂಗಿಸುವಲ್ಲಿ ಮತ್ತು ಕೀಟಗಳನ್ನು ನಿಯಂತ್ರಿಸಲು, ಹಾಗೂ ಯಾಂತ್ರಿಕ ಬೇಸಾಯಕ್ಕಾಗಿ ರಾಸಾಯನಿಕ ಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳು, ಗಿಡ ಬೆಳವಣಿಗೆ ನಿಯಂತ್ರಣಗಳು, ಜಾನುವಾರು ಮೇವು ಸೇರ್ಪಡೆಗಳು, ಮತ್ತು ತಳಿವಿಜ್ಞಾನ ಪ್ರಕಾರವಾಗಿ ಮಾರ್ಪಡಿಸಿದ ಸಾವಯವಗಳನ್ನು ಹೊರತುಪಡಿಸಿ ಅಥವಾ ಕಟ್ಟುನಿಟ್ಟಾಗಿ ನಿಯಮಿತಗೊಳಿಸುವ ವ್ಯವಸಾಯದ ಒಂದು ಭಾಗವಾಗಿದೆ. [೧] 1990 ರಿಂದ, ಸಾವಯವ ಉತ್ಪನ್ನಗಳಿಗಾಗಿನ ಮಾರುಕಟ್ಟೆಯು 2007 ರಲ್ಲಿ $46 ಬಿಲಿಯನ್ ತಲುಪಲು ತೀವ್ರಗತಿಯಲ್ಲಿ ಏರಿಕೆ ಕಂಡಿತು. ಸುವ್ಯವಸ್ಥಿತವಾಗಿ ನಿರ್ವಹಿಸುವ ಒಕ್ಕಲುಭೂಮಿಯಲ್ಲಿ ಈ ಬೇಡಿಕೆಯು ಸಜಾತೀಯ ವರ್ಧನೆಯನ್ನು ನಡೆಸುತ್ತದೆ. ಸರಿಸುಮಾರು 32.2 ಮಿಲಿಯನ್ ಹೆಕ್ಟೇರು ನಷ್ಟು ವಿಶ್ವವ್ಯಾಪ್ತಿಯಾಗಿ ಈಗ ಸುವ್ಯವಸ್ಥಿತವಾಗಿ ಒಕ್ಕಲು ಮಾಡಲಾಗಿದೆ, ಒಟ್ಟು ಜಗತ್ತಿನ ಒಕ್ಕಲುಭೂಮಿಯನ್ನು ಪ್ರತಿನಿಧಿಸುವ ಸರಿಸುಮಾರು ಪ್ರತಿಶತ 0.8 ರಷ್ಟು. [೨] ಅದರ ಜೊತೆಗೆ, 2007 ನಲ್ಲಿ ಸಾವಯವ ವನ್ಯ ಉತ್ಪನ್ನಗಳನ್ನು ಸರಿಸುಮಾರು ೩೦ ಮಿಲಿಯನ್ ಹೆಕ್ಟೇರುಗಳಷ್ಟು ಸಾಗುವಳಿ ಮಾಡಲಾಗಿದೆ. [೩]


ಹಲವು ರಾಷ್ಟ್ರಗಳಲ್ಲಿ ಸಾವಯವ ಬೇಸಾಯ ಪದ್ಧತಿಗಳನ್ನು ಅಂತರಾಷ್ಟ್ರೀಯವಾಗಿ ನಿಯಮಗಳಿಗೊಳಪಡಿಸಲಾಗಿದೆ ಮತ್ತು ಕಾನೂನುಬದ್ಧವಾಗಿ ವಿಧಿಸಲಾಗಿದೆ, ಸಾವಯವ ಕೃಷಿ ಚಳುವಳಿಗಳಲ್ಲಿನ ಅಂತರಾಷ್ಟ್ರೀಯ ಒಕ್ಕೂಟದ ಮೇರೆಗೆ ದೊಡ್ಡ ಪ್ರಮಾಣದ ಗುಮಟ್ಟವನ್ನು ಹೊಂದಿಸುವ ಮೂಲವಾಗಿ (ಐಎಫ್ಒಎಎಮ್), ಅಂತರಾಷ್ಟ್ರೀಯ ಆಶ್ರಯ ಸಂಘಟನೆಯು ಸಾವಯವ ಸಮಷ್ಟಿಯನ್ನು ರಚಿಸುವುದಕ್ಕಾಗಿ 1972 ರಲ್ಲಿ ಸ್ಥಾಪಿಸಲಾಗಿದೆ. ಐಎಫ್‌ಒಎಎಮ್ ಲಕ್ಷಣಗಳ ಮೇಲೆಬಾಗಿರುವ ಸಾವಯವ ಬೇಸಾಯದ ದ್ಯೇಯಗಳು ಈ ಕೆಳಗಿನಂತಿವೆ:


"Organic agriculture is a production system that sustains the health of soils, ecosystems and people. It relies on ecological processes, biodiversity and cycles adapted to local conditions, rather than the use of inputs with adverse effects. Organic agriculture combines tradition, innovation and science to benefit the shared environment and promote fair relationships and a good quality of life for all involved.."

— International Federation of Organic Agriculture Movements [೪]

ಇತಿಹಾಸ


ಸಾವಯವ ಚಳುವಳಿ 1930-1940 ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು. ಕೃತಕ ಗೊಬ್ಬರಗಳನ್ನು ಮೊದಲು ಸೂಪರ್ ಫಾಸ್‌ಪೇಟ್ ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣದಲ್ಲಿ 18 ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು. ಮೊದಲನೆಯ ವಿಶ್ವ-ಮಹಾಯುದ್ಧದ ಸಮಯದಲ್ಲಿ ಹೇಬರ್ -ಬಾಷ್ ವಿಧಾನವನ್ನು ಅನುಸರಿಸಿ ಇದನ್ನು ತಯಾರಿಸಲಾಯಿತು. ಪ್ರಾರಂಭದಲ್ಲಿ ತಯಾರಾದ ಈ ಗೊಬ್ಬರಗಳು ಅಗ್ಗವಾಗಿ ದೊರೆಯುತ್ತಿದ್ದು ಶಕ್ತಿಯುತವಾಗಿಯೂ ಇದ್ದುದಲ್ಲದೆ ಸುಲಭವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ಇಂತಹುದೇ ಪ್ರಗತಿ 1940 ರ ಸುಮಾರಿನಲ್ಲಿ ರಾಸಾಯನಿಕ ಕೀಟನಾಶಕಗಳಲ್ಲಿಯೂ ಕಂಡುಬಂದಿತು. ಅದರ ಫಲವಾಗಿ ಈ ದಶಕವನ್ನು 'ಕೀಟನಾಶಕ ಯುಗ'ವೆಂದು ಕರೆಯಲಾಯಿತು.


ಸರ್ ಆಲ್ಬರ್ಟ್ ಹೊವಾರ್ಡ್ ಅವರನ್ನು ಸಾವಯವ ಬೇಸಾಯದ ಪಿತಾಮಹಾನೆಂದು ವಿಶೇಷವಾಗಿ ಪರಿಗಣಿಸಲಾಗಿದೆ. ಜೆ.ಐ.ರೊಡೇಲ್ ಅವರು ಈ ನಿಟ್ಟಿನಲ್ಲಿ ಹೆಚ್ಚು ಕೆಲಸವನ್ನು ಒಕ್ಕೂಟ ಸಂಸ್ಥಾನಗಳಲ್ಲಿ ಮಾಡಿದರು, ಲೇಡಿ ಈವ್ ಬಾಲ್ ಫೋಲ್ ಅವರು ಯುನೈಟೆಡ್ ಕಿಂಗ್ಡಂನಲ್ಲಿಯೂ ಮತ್ತೆ ಹಲವು ಮಂದಿ ವಿಶ್ವದ ಉದ್ದಗಲದಲ್ಲಿ ಮಾಡಿದರು.


ಸಾವಯವ ಬೇಸಾಯ ಒಟ್ಟು ಕೃಷಿ ಉತ್ಪನ್ನ ಶೇಕಡಾ ಪ್ರಮಾಣವನ್ನು ಪರಿಗಣಿಸಿದಾಗ ಪ್ರಾರಂಭದಿಂದಲೂ ತೀರಾ ಕಡಿಮೆಯಾಗಿಯೇ ಉಳಿದುಕೊಂಡು ಬಂದಿದೆ. ಜನಸಾಮಾನ್ಯರಲ್ಲಿ ಪರಿಸರದ ಪರಿಜ್ಞಾನ ಮತ್ತು ಶ್ರದ್ಧೆ ಹೆಚ್ಚಾದಂತೆಲ್ಲಾ ಮೂಲಭೂತವಾಗಿ ಸರಬರಾಜು ವ್ಯವಸ್ಥೆಯ ಚಳುವಳಿ ಒಂದು ಬೇಡಿಕೆಯ ಕೆಲಸವಾಗಿ ಪರಿಣಮಿಸಿತು. ಬಳಕೆದಾರರಿಂದ ಹಾಗೂ ಕೆಲವು ಸಂದರ್ಭಗಳಲ್ಲಿ ಸರಕಾರದ ಸಹಾಯ ಧನದಿಂದ ಬೇಡಿಕೆಗಳು ಅಧಿಕಗೊಂಡವು. ಇದರಿಂದ ಆಕರ್ಷಿತರಾದ ಬೇಸಾಯಗಾರರು ಬದಲಾವಣೆಗಾಗಿ ಹಾತೊರೆದರು. ಪ್ರಗತಿಪರ ರಾಷ್ಟ್ರಗಳಲ್ಲಿನ ಬಹುಮಂದಿ ಬೇಸಾಯಗಾರರು ಅನೂಚಾನವಾಗಿ ಬಂದ ವಿಧಾನದಲ್ಲಿ ಬೇಸಾಯಮಾಡುತ್ತಿದ್ದವರು. ಆ ವಿಧಾನಗಳೆಲ್ಲವೂ ಸಾವಯವ ಕೃಷಿಪದ್ಧತಿಯೊಂದಿಗೆ ಬಹುಮಟ್ಟಿಗೆ ಹೋಲುವಂತಿದ್ದರೂ ಅವುಗಳಿಗೆ ಯಾವ ಬಗೆಯ ಯೋಗ್ಯತಾ ಪತ್ರಗಳಿರಲಿಲ್ಲ. ಮತ್ತೆ ಕೆಲವು ವಿಷಯಗಳಲ್ಲಿ ಪ್ರಗತಿಪರ ರಾಷ್ಟ್ರಗಳ ಬೇಸಾಯಗಾರರು ಆರ್ಥಿಕ ಕಾರಣಗಳಿಗಾಗಿ ತಮ್ಮ ವಿಧಾನವನ್ನು ಬದಲಾಯಿಸಿಕೊಂಡರು. ವಿಶ್ವದ ಒಟ್ಟು ಕೃಷಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸುತ್ತದೆಯಾದರೂ ಅದು ಅನೇಕ ರಾಷ್ಟ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ, ವಿಶೇಷವಾಗಿ ಯುರೋಪ್ ದೇಶಗಳಲ್ಲಿ.

Other Languages
العربية: زراعة عضوية
অসমীয়া: জৈৱিক কৃষি
български: Биоземеделие
हिन्दी: जैविक खेती
Bahasa Indonesia: Pertanian organik
日本語: 有機農業
한국어: 유기농
മലയാളം: ജൈവകൃഷി
Bahasa Melayu: Pertanian organik
မြန်မာဘာသာ: အော်ဂဲနစ်
नेपाली: जैविक खेती
ਪੰਜਾਬੀ: ਜੈਵਿਕ ਖੇਤੀ
srpskohrvatski / српскохрватски: Organska poljoprivreda
Simple English: Organic farms
slovenščina: Ekološko kmetijstvo
српски / srpski: Organska poljoprivreda
Türkçe: Organik tarım
Tiếng Việt: Nông nghiệp hữu cơ
中文: 有機農業
Bân-lâm-gú: Iú-ki lông-gia̍p