ಸಂಗೀತ ವಾದ್ಯ

ಸಂಗೀತದ ಧ್ವನಿಯನ್ನು ಹೊರಡಿಸುವ ಉದ್ದೇಶದಿಂದ ಸಂಗೀತ ವಾದ್ಯ ವನ್ನು ತಯಾರಿಸಲಾಗಿದೆ. ಮೂಲತತ್ವದಲ್ಲಿ, ಧ್ವನಿಯನ್ನು ಹೊರಡಿಸುವ ಯಾವುದೇ ವಸ್ತು ಸಂಗೀತ ವಾದ್ಯವಾಗುತ್ತದೆ. ಸಂಗೀತ ವಾದ್ಯಗಳ ಇತಿಹಾಸವು ಮಾನವ ಸಂಸ್ಕೃತಿಯ ಪ್ರಾರಂಭದ ದಿನದಿಂದ ಇದೆ. ಸಂಗೀತ ವಾದ್ಯಗಳ ಶೈಕ್ಷಣಿಕ ಅಧ್ಯಯನವನ್ನು ಆರ್ಗನಾಲಜಿ ಎನ್ನುವರು.

ಮೊಟ್ಟಮೊದಲ ಸಂಗೀತ ವಾದ್ಯ ಎಂದು ಗುರುತಿಸಲ್ಪಟ್ಟ ಸಾಧನವು ಸುಮಾರು 67,000 ವರ್ಷ ಹಿಂದಿನದಾಗಿದೆ; 37,000 ವರ್ಷ ಹಿಂದೆ ಕೂಡ ಬಳಕೆಯಲ್ಲಿದ್ದ ಕೊಳಲನ್ನು ಮೊದಲ ಸಂಗೀತ ಸಾಧನ ಎಂದು ಒಪ್ಪಿಕೊಳ್ಳಲಾಗಿದೆ. ಸಂಗೀತ ವಾದ್ಯ ಎಂಬುದರ ವ್ಯಾಖ್ಯಾನವನ್ನು ನಿರ್ಧಿಷ್ಟವಾಗಿ ಹೇಳಲು ಅಸಾಧ್ಯವಾದ ಸಂದರ್ಭದಿಂದಾಗಿ ಇತಿಹಾಸಕಾರರಿಗೆ ಸಂಗೀತ ವಾದ್ಯದ ಉಗಮದ ನಿರ್ದಿಷ್ಟ ಅವಧಿಯನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಸಂಗೀತ ವಾದ್ಯಗಳು ಪ್ರಪಂಚದ ಬೇರೆ ಬೇರೆ ಜನವಸತಿಯ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿವೆ. ಆದಾಗ್ಯೂ, ನಾಗರೀಕತೆಯ ಸಂಪರ್ಕದಿಂದಾಗಿ ಬಹಳಷ್ಟ ವಾದ್ಯಗಳು ಅವರ ಮೂಲ ಪ್ರದೇಶದಿಂದ ಬಹು ದೂರದ ಜನರವರೆಗೆ ತ್ವರಿತವಾಗಿ ಹರಡಿದವು ಮತ್ತು ಅವರು ಅದನ್ನು ಅಳವಡಿಸಿಕೊಂಡರು. ಮಧ್ಯಯುಗದಲ್ಲಿ, ಮೆಸಪೊಟೆಮಿಯಾದ ವಾದ್ಯವನ್ನು ಮಲಾಯ್‌ ದ್ವೀಪಗಳಲ್ಲಿ ಬಳಸುತ್ತಿದ್ದರು. ಯುರೋಪಿಯನ್ನರು ಉತ್ತರ ಅಮೇರಿಕಾದ ವಾದ್ಯಗಳನ್ನು ನುಡಿಸುತ್ತಿದ್ದರು. ಅಮೇರಿಕಾದಲ್ಲಿ ಸಂಗೀತ ಸಾಧನಗಳ ಅಭಿವೃದ್ಧಿ ನಿಧಾನವಾಗಿತ್ತು. ಆದರೆ ಉತ್ತರ, ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಸಂಸ್ಕೃತಿಗಳು ಸಂಗೀತ ವಾದ್ಯಗಳನ್ನು ಹಂಚಿಕೊಂಡಿದ್ದವು.

ಪುರಾತತ್ವ ಶಾಸ್ತ್ರ

ಮೊದಲ ಸಂಗೀತ ವಾದ್ಯಗಳನ್ನು ಯಾರು ಮತ್ತು ಯಾವಾಗ ಕಂಡುಹಿಡಿದರು ಎಂದು ತಿಳಿಯುವ ಅನ್ವೇಷಣೆಯಲ್ಲಿ ಸಂಶೋಧನಾಕಾರರು ಪ್ರಪಂಚದ ವಿವಿಧ ಭಾಗಗಳಲ್ಲಿ ಸಂಗೀತ ವಾದ್ಯಗಳ ಬೇರೆ ಬೇರೆ ಅವಶೇಷಗಳನ್ನು ಪತ್ತೆ ಮಾಡಿದರು. ಕೆಲವು ಶೋಧನೆಗಳು ಸುಮಾರು 67,000 ವರ್ಷಕ್ಕಿಂತ ಹಳೆಯದು, ಆದರೆ ಸಂಗೀತ ವಾದ್ಯಗಳಾಗಿ ಅವುಗಳ ಸ್ಥಿತಿ ಕೆಲವೊಮ್ಮೆ ವಿವಾದಾತ್ಮಕವಾಗಿದೆ. ಸುಮಾರು 37,000 ವರ್ಷ ಹಳೆಯ ಮತ್ತು ನಂತರದ ಕಲಾಕೃತಿಗಳ ಬಗ್ಗೆ ಒಮ್ಮತವಾಗಿ ಒಪ್ಪಿಕೊಳ್ಳಲಾಗಿದೆ. ಕೇವಲ ಕಲಾಕೃತಿಗಳನ್ನು ಜೀವಿತವಾಗಿಡಲು ಬಾಳಿಕೆ ಬರುವ ಉಪಕರಣಗಳಿಂದ ತಯಾರಿಸಲಾಗಿದೆ ಅಥವಾ ಬಾಳಿಕೆ ಬರುವ ವಿಧಾನದಲ್ಲಿ ಉಪಯೋಗಿಸಲಾಗುತ್ತಿದೆ. ಹೀಗೆ, ಸಿಕ್ಕ ಮಾದರಿಗಳನ್ನು ಮೊದಲ ಸಂಗೀತ ವಾದ್ಯಗಳನ್ನು ಖಂಡಿಸಲಾಗದ ಸ್ಥಿತಿಯಲ್ಲಿ ಇಡಲು ಸಾಧ್ಯವಾಗಿಲ್ಲ.[೧]

ಚಿತ್ರ:Image-Divje01.jpg
ಬಾಬ್ ಪಿಂಕ್‌ರಿಂದ ಚರ್ಚಿತ ಕೊಳಲಿನ ಚಿತ್ರಣ

ಜುಲೈ 1995ರಲ್ಲಿ, ಸ್ಲೊವೇನಿಯಾದ ಉತ್ತರ ಪೂರ್ವ ಪ್ರದೇಶದಲ್ಲಿ ಪ್ರಾಣಿಗಳ ಎಲುಬುಗಳ ಕೆತ್ತನೆಯನ್ನು ಸ್ಲೊವೇನಿಯಾದ ಪುರಾತತ್ವ ಶಾಸ್ತ್ರಜ್ಞ ಐವನ್ ತರ್ಕ್ ಪತ್ತೆ ಮಾಡಿದರು. ದಿವ್‌ಜೆ ಬೇಬ್ ಫ್ಲೂಟ್ ಹೆಸರಿನ ಕೆತ್ತನೆ ನಾಲ್ಕು ತೂತುಗಳನ್ನು ಹೊಂದಿತ್ತು, ಇದನ್ನು ಅಪಸ್ವರ ಶ್ರೇಣಿಯ ನಾಲ್ಕು ನೋಟುಗಳನ್ನು ನುಡಿಸಲು ಬಳಸಬಹುದು ಎಂದು ಕೆನಡದ ಸಂಗೀತ ಶಾಸ್ತ್ರಜ್ಞ ಬಾಬ್ ಫಿಂಕ್ ಕಂಡುಹಿಡಿದರು. ಈ ಕೊಳಲು ಸುಮಾರು 43,400 ಮತ್ತು 67,000 ವರ್ಷಗಳ ಮಧ್ಯದಲ್ಲಿನ ಅವಧಿಯದು ಎಂದು ಸಂಶೋಧಕರು ಊಹಿಸಿದರು. ಅತ್ಯಂತ ಹಳೆಯ ಸಂಗೀತ ವಾದ್ಯ ಎಂದು ಇದನ್ನು ಪರಿಗಣಿಸಲಾಯಿತು. ನಿಯಾಂಡರ್ತಾಲ್ ಸಂಸ್ಕೃತಿಗೆ ಸಂಬಂಧಿಸಿದ ಏಕೈಕ ಸಂಗೀತವಾದ್ಯ ಇದಾಗಿದೆ.[೨] ಆದಾಗ್ಯೂ, ಕೆಲವು ಪುರಾತತ್ವ ಶಾಸ್ತ್ರಜ್ಞರು ಒಂದು ಸಂಗೀತ ವಾದ್ಯದ ರೂಪದಲ್ಲಿ ಕೊಳಲಿನ ಸ್ಥಿತಿಯನ್ನು ಪ್ರಶ್ನಿಸಿದರು.[೩] ಜರ್ಮನಿಯ ಪುರಾತತ್ವ ಶಾಸ್ತ್ರಜ್ಞರಿಗೆ ಸ್ವಾಬೇನ್ ಆಲ್ಬಿನಲ್ಲಿ 30,000 ದಿಂದ 37,000 ವರ್ಷ ಹಿಂದಿನ ಮಹಾಗಜ ಮತ್ತು ಹಂಸದ ಎಲುಬಿನಿಂದ ಮಾಡಿದ ಕೊಳಲುಗಳನ್ನು ಉತ್ಖನನ ಸಮಯದಲ್ಲಿ ದೊರೆಯಿತು. ಈ ಶಿಲಾಯುಗಕ್ಕೆ ಸಂಬಂಧಿಸಿದ ಕಾಲದಲ್ಲಿ ಮಾಡಿದ್ದಾಗಿರುವ ಕೊಳಲುಗಳು ಅತ್ಯಂತ ಹಳೆಯ ಸಂಗೀತ ವಾದ್ಯ ಎಂದು ಕರೆಯಲು ಹೆಚ್ಚು ಒಮ್ಮತದಿಂದ ನಿರ್ಧರಿಸಲಾಯಿತು.[೪]

ಸಂಗೀತ ವಾದ್ಯಗಳ ಪುರಾತನ ಪುರಾವೆಯು ಸುಮೇರಿಯಾದ ಪುರಾತನ ನಗರದ ರಾಯಲ್ ಸಿಮೆಟರಿಯ ಉತ್ಖನನದಲ್ಲಿ ದೊರೆಯಿತು. ( ಪುರಾತನ ಲೈರ್ ವಾದ್ಯಗಳನ್ನು ನೋಡಿ). ಈ ವಾದ್ಯಗಳು ಒಂಭತ್ತು ಲೈರುಗಳು, ಎರಡು ಹಾರ್ಪುಗಳು, ಒಂದು ಬೆಳ್ಳಿ ದ್ವಿಕೊಳಲು, ಸಿಸ್ಟ್ರ ಮತ್ತು ಸಿಂಬಲ್ ಗಳನ್ನು ಒಳಗೊಂಡಿವೆ. ಪುರಾತನ ಕಾಲದಲ್ಲಿ ಕಂಡುಬಂದ ಕೊಳಲಿನ-ಧ್ವನಿಯಿರುವ ಬೆಳ್ಳಿಯ ಕೊಳವೆಗಳ ಗುಂಪು ಆಧುನಿಕ ಬ್ಯಾಗ್‍ಪೈಪುಗಳ ಪೂರ್ವಿಕ ಆಗಿದ್ದಿರಬಹುದು.[೫] ಸಿಲೆಂಡರ್ ಆಕೃತಿಯ ಪೈಪುಗಳು ಹೊಂದಿರುವ ಮೂರು ಬದಿಯ-ತೂತುಗಳು ನುಡಿಸುವವರಿಗೆ ಪೂರ್ಣ ಪ್ರಮಾಣದ ಸ್ವರವನ್ನು ಹೊರಡಿಸಲು ಅವಕಾಶ ನೀಡುತ್ತವೆ.[೬] ಈ ಉತ್ಖನನಗಳು 1920ರ ದಶಕದಲ್ಲಿ ಲಿಯೋನಾರ್ಡ್ ವೂಲೆ ಅವರಿಂದ ಮಾಡಲ್ಪಟ್ಟಿತು, ವಾದ್ಯಗಳ ತೆರೆದ ಕೆಳದರ್ಜೆಗೆ ಇಳಿಸಲಾಗದ ಅವಶೇಷಗಳು ಮತ್ತು ಕೆಳದರ್ಜೆಗಿಳಿಸಿದ ಭಾಗಗಳ ಉಳಿದ ನಿರರ್ಥಕಗಳನ್ನು ಒಟ್ಟಿಗೆ ಸೇರಿಸಿ ಅವುಗಳ ಪುನರ್ ನಿರ್ಮಾಣಕ್ಕೆ ಉಪಯೋಗಿಸಲಾಯಿತು.[೭] ಯಾವ ಸಮಾಧಿಯಲ್ಲಿ ಈ ವಾದ್ಯಗಳು ದೊರೆತವೋ ಆ ಸಮಾಧಿಯ ಮೇಲೆ ಕ್ರಿ.ಪೂ 2600ರಿಂದ 2500 ಎಂದು ಬರೆಯಲಾಗಿತ್ತು.[೮]

ಕ್ರಿಸ್ತ ಪೂರ್ವ 2000ರ ಮೆಸಪೋಟೆಮಿಯದಲ್ಲಿ ನಿಪ್ಪುರಿನಿಂದ ಕ್ಯೂನಿಫಾರಂ ಫಲಕ, ಲೈರ್ ಮೇಲಿರುವ ತಂತಿಗಳ ಹೆಸರುಗಳನ್ನು ಸೂಚಿಸುತ್ತದೆ ಮತ್ತು ಮೊದಲ ಸಂಗೀತ ಸಂಕೇತವನ್ನು ಪ್ರತಿನಿಧಿಸುತ್ತದೆ.[೯]

Other Languages
Afrikaans: Musiekinstrument
Alemannisch: Musikinstrument
العربية: آلة موسيقية
azərbaycanca: Musiqi aləti
беларуская (тарашкевіца)‎: Музычны інструмэнт
bamanankan: Fɔlifɛn
བོད་ཡིག: རོལ་ཆ།
brezhoneg: Benveg-seniñ
Cymraeg: Offeryn cerdd
Ελληνικά: Μουσικό όργανο
euskara: Musika tresna
فارسی: ساز
suomi: Soitin
Võro: Pill
Gaeilge: Uirlis cheoil
贛語: 樂器
Gàidhlig: Innealan-ciùil
ગુજરાતી: સંગીત વાદ્ય
עברית: כלי נגינה
hrvatski: Glazbala
magyar: Hangszer
Bahasa Indonesia: Alat musik
íslenska: Hljóðfæri
日本語: 楽器
la .lojban.: zgitci
Basa Jawa: Piranti musik
한국어: 악기
Lëtzebuergesch: Museksinstrument
lingála: Eyémbeli
Bahasa Melayu: Alat muzik
မြန်မာဘာသာ: တူရိယာ
Nāhuatl: Tlatzotzonalli
Plattdüütsch: Musikinstrument
नेपाल भाषा: बाजं
Nederlands: Muziekinstrument
norsk nynorsk: Musikkinstrument
ਪੰਜਾਬੀ: ਸਾਜ਼
پښتو: ساز
Runa Simi: Waqachina
armãneashti: Hâlati muzicalâ
संस्कृतम्: वाद्ययन्त्राणि
srpskohrvatski / српскохрватски: Muzički instrumenti
Simple English: Musical instrument
slovenčina: Hudobný nástroj
slovenščina: Glasbilo
Soomaaliga: Qalab muusig
Seeltersk: Musikinstrumente
Türkçe: Çalgı
oʻzbekcha/ўзбекча: Musiqa asbobi
Tiếng Việt: Nhạc cụ
West-Vlams: Muziekinstrument
吴语: 乐器
中文: 乐器
Bân-lâm-gú: Ga̍k-khì
粵語: 樂器