ರಾಯಲ್ ಸೊಸೈಟಿ
English: Royal Society

Royal Society
Arms of the Royal Society.svg
MottoNullius in verba
ಸ್ಥಾಪನೆ28 November 1660
ಪ್ರಧಾನ ಕಚೇರಿLondon, United Kingdom
Membership
5 Royal Fellows
1350 Fellows
140 Foreign Members
President
www.royalsociety.org
ರಾಯಲ್ ಸೊಸೈಟಿಯ ಪ್ರಸಕ್ತ ಕಟ್ಟಡಗಳು 6–9 ಕಾರ್ಲ್‌ಟನ್ ಹೌಸ್ ಟೆರೇಸ್, ಲಂಡನ್ (ಪ್ರಥಮ ನಾಲ್ಕು ಆಸ್ತಿಗಳು ಮಾತ್ರ)

ಸಹಜ ಜ್ಞಾನ ಸುಧಾರಣೆಗೆ ಇರುವ ರಾಯಲ್ ಸೊಸೈಟಿ ಆಫ್ ಲಂಡನ್ ಸರಳವಾಗಿ ರಾಯಲ್ ಸೊಸೈಟಿ ಎಂದು ಹೆಸರಾಗಿದೆ. ಇದು ವಿಜ್ಞಾನಕ್ಕಾಗಿ ವಿದ್ವಾಂಸರ ಸಂಘವಾಗಿದ್ದು, ಅಸ್ತಿತ್ವದಲ್ಲಿರುವ ಇಂತಹ ಅತೀ ಹಳೆಯ ಸೊಸೈಟಿಯಾಗಿದೆ.[೧]೧೬೬೦ರಲ್ಲಿ ಸ್ಥಾಪಿತವಾದ ಇದಕ್ಕೆ ಕಿಂಗ್ ಚಾರ್ಲ್ಸ್ II "ರಾಯಲ್ ಸೊಸೈಟಿ ಆಫ್ ಲಂಡನ್" ಎಂಬ ರಾಜ ಸನ್ನದು ನೀಡಿದರು. ಆರಂಭದಲ್ಲಿ ಸೊಸೈಟಿಯು "ಇನ್ವಿಸಿಬಲ್ ಕಾಲೇಜ್‌"ನ ವಿಸ್ತರಣೆಯಾಗಿದ್ದು, ಸಂಸ್ಥಾಪಕರು ಸಂಶೋಧನೆ ಮತ್ತು ಚರ್ಚೆಯ ಸ್ಥಳವಾಗಲು ಬಯಸಿದ್ದರು. ಸೊಸೈಟಿಯು ಇಂದು ಬ್ರಿಟಿಷ್ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಸದೀಯ ಸಹಾಯಧನವನ್ನು ಸ್ವೀಕರಿಸುತ್ತದೆ. ಸೊಸೈಟಿಯು UK ಯ ಅಕಾಡೆಮಿ ಆಫ್ ಸೈನ್ಸಸ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸಂಶೋಧನೆ ಫೆಲೋಶಿಪ್‌ಗಳಿಗೆ ಮತ್ತು ವೈಜ್ಞಾನಿಕ ಪ್ರಾರಂಭದ ಕಂಪೆನಿಗಳಿಗೆ ಆರ್ಥಿಕ ನೆರವು ನೀಡುತ್ತದೆ.

ಸೊಸೈಟಿಯ ಆಡಳಿತವನ್ನು ಅದರ ಕೌನ್ಸಿಲ್ ನಿರ್ವಹಿಸುತ್ತದೆ. ಕಟ್ಟಳೆಗಳು ಮತ್ತು ಸ್ಥಾಯಿ ಆದೇಶಗಳ ಪ್ರಕಾರ ಇದಕ್ಕೆ ಸೊಸೈಟಿಯ ಅಧ್ಯಕ್ಷರು ಅಧ್ಯಕ್ಷತೆ ವಹಿಸುತ್ತಾರೆ. ಕೌನ್ಸಿಲ್ ಸದಸ್ಯರನ್ನು ಮತ್ತು ಅಧ್ಯಕ್ಷರನ್ನು ಅದರ ಫೆಲೋಗಳು ಆಯ್ಕೆ ಮಾಡುತ್ತಾರೆ. ಫೆಲೋಗಳು ಸೊಸೈಟಿಯ ಮೂಲ ಸದಸ್ಯರಾಗಿದ್ದು, ಅವರನ್ನು ಸ್ವತಃ ಅಸ್ತಿತ್ವದಲ್ಲಿರುವ ಫೆಲೋಗಳು ಆಯ್ಕೆ ಮಾಡುತ್ತಾರೆ. ಅಲ್ಲಿ ಪ್ರಸಕ್ತ ೧೩೧೪ ಫೆಲೋಗಳಿದ್ದು, ಹೆಸರಿನ ನಂತರದ ಬಿರುದನ್ನು(ಫೆಲೋ ಆಫ್ ದಿ ರಾಯಲ್ ಸೊಸೈಟಿ) ಬಳಸಲು ಅವಕಾಶ ನೀಡಲಾಯಿತು ಮತ್ತು ೪೪ ಹೊಸ ಫೆಲೋಗಳನ್ನು ಪ್ರತಿ ವರ್ಷ ನೇಮಕ ಮಾಡಲಾಯಿತು. ಅವರಲ್ಲಿ ರಾಯಲ್ ಫೆಲೋಗಳು, ಗೌರವ ಫೆಲೋಗಳು ಮತ್ತು ವಿದೇಶಿ ಫೆಲೋಗಳಿದ್ದರು. ಕೊನೆಯವರಿಗೆ ಅವರ ಹೆಸರಿನ ನಂತರದ ಬಿರುದು ForMemRS (ಫಾರೀನ್ ಮೆಂಬರ್ ಆಫ್ ದಿ ರಾಯಲ್ ಸೊಸೈಟಿ)ಯನ್ನು ಬಳಸಲು ಅವಕಾಶ ನೀಡ ಲಾಯಿತು. ಪ್ರಸಕ್ತ ರಾಯಲ್ ಸೊಸೈಟಿ ಅಧ್ಯಕ್ಷ ಸರ್ ಪಾಲ್ ನರ್ಸ್ ಆಗಿದ್ದು, ಅವರು ೨೦೧೦ರ ನವೆಂಬರ್ ೩೦ರಂದು ಈ ಸ್ಥಾನವನ್ನು ಸ್ವೀಕರಿಸಿದರು.

೧೯೬೭ರಿಂದೀಚೆಗೆ, ಸೊಸೈಟಿಯು 6–9 ಕಾರ್ಲ್‌ಟನ್ ಹೌಸ್ ಟೆರೇಸ್‌ನಲ್ಲಿ ನೆಲೆಹೊಂದಿದ್ದು, ಇದು ಕೇಂದ್ರ ಲಂಡನ್‌ನಲ್ಲಿ ಗ್ರೇಡ್ ೧ ಪಟ್ಟಿಮಾಡಿದ ಕಟ್ಟಡವಾಗಿದೆ.

ಪರಿವಿಡಿ

Other Languages
Afrikaans: Royal Society
Alemannisch: Royal Society
asturianu: Royal Society
беларуская (тарашкевіца)‎: Лёнданскае каралеўскае таварыства
brezhoneg: Royal Society
català: Royal Society
Deutsch: Royal Society
English: Royal Society
español: Royal Society
euskara: Royal Society
français: Royal Society
Gaeilge: Cumann Ríoga
Bahasa Indonesia: Royal Society
italiano: Royal Society
日本語: 王立協会
한국어: 왕립학회
Lëtzebuergesch: Royal Society
македонски: Кралско друштво
Bahasa Melayu: Royal Society
Nederlands: Royal Society
norsk nynorsk: Royal Society
occitan: Royal Society
português: Royal Society
română: Royal Society
srpskohrvatski / српскохрватски: Kraljevsko društvo
Simple English: The Royal Society
slovenščina: Kraljeva družba
српски / srpski: Краљевско друштво
svenska: Royal Society
தமிழ்: அரச கழகம்
Türkçe: Royal Society
oʻzbekcha/ўзбекча: London qirollik jamiyati
中文: 皇家学会