ಪ್ರವಾಸೋದ್ಯಮ
English: Tourism

 • ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ ವಿಶ್ವದ ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡಿದ ದೇಶವಾಗಿದೆ.[2][4]
  ದಿ ಅಲ್ಹಾಂಬ್ರಾ, ಗ್ರ್ಯಾನಡಾ, ಸ್ಪೇನ್‌.
  ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವಾರ್‌, ಯುನೈಟೆಡ್ ಸ್ಟೇಟ್ಸ್‌.
  ಚೀನಾದ ಮಹಾಗೋಡೆ, ಚೀನಾ.
  ರೋಮ್‌ನಲ್ಲಿರುವ ಕಲಾಸಿಯಮ್‌, ಇಟಲಿ.
  ಲಂಡನ್‌ನಲ್ಲಿರುವ ಟ್ರ್ಯಾಫಲ್ಗರ್‌ ಸ್ಕ್ವಾರ್‌, ಯುನೈಟೆಡ್‌ ಕಿಂಗ್‌ಡಮ್‌.
  ಬವರಿಯಾದಲ್ಲಿರುವ ನ್ಯೂಶ್ವೆಸ್ಟೀನ್‌ ಕೋಟೆ, ಜರ್ಮನಿ.
  st. ಮೈಕಲ್‌ರ ಚಿನ್ನದ ಗೋಪುರದ ಮಂದಿರ, ಕೀವ್‌, ಉಕ್ರೇನ್‌.
  ಹಗೀಯಾ ಸೋಫಿಯಾ, ಇಸ್ತಾಂಬುಲ್‌, ಟರ್ಕಿ.
  "ಎಲ್ ಕ್ಯಾಸ್ಟಿಲೋ", ಚಿಚೆನ್ ಇಟ್ಜಾ, ಮೆಕ್ಸಿಕೊ.
  ಟೊಕಿಯೊ ಡಿಸ್ನಿಲ್ಯಾಂಡ್‌, ಜಪಾನ್‌.
  ವ್ಯೂ ಫ್ರಮ್ ವಿಕ್ಟೋರಿಯಾ ಪೀಕ್‌, ಹಾಂಗ್ ಕಾಂಗ್‌.
  ಸಿಡ್ನಿ ಒಪೆರಾ ಹೌಸ್‌, ಸಿಡ್ನಿ, ಆಸ್ಟ್ರೇಲಿಯಾ.
  ಈಜಿಪ್ಟ್‌ನಲ್ಲಿರುವ ಗಿಜಾ ಗೋರಿ.
  ತಾಜ್ ಮಹಲ್‌, ಆಗ್ರಾ, ಭಾರತ.
  ಹಸಿರು ಬಣ್ಣದ ಬುದ್ಧ ದೇವಾಲಯ, ಗ್ರ್ಯಾಂಡ್ ಪ್ಯಾಲೇಸ್‌, ಬ್ಯಾಂಗ್‌ಕಾಕ್‌, ಥೈಲೆಂಡ್‌.

  ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿಗರು ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು (24) ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ.[೧] ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ. 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವು ದಾಖಲಾಗಿದ್ದು, 2007ಕ್ಕೆ ಈ ಪ್ರಮಾಣವನ್ನು ಹೋಲಿಸಿದಾಗ 1.9%ರಷ್ಟು ಬೆಳವಣಿಗೆ ಕಂಡಂತಾಗಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ us$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.[೨]


  2000ರ ಕೊನೆಯ ಅವಧಿಯಲ್ಲಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಉತ್ತರ ಧ್ರುವದ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಆಗಮನಗಳಲ್ಲಿ 2%ರಷ್ಟು ಕುಸಿಯುವುದರೊಂದಿಗೆ, 2008ರ ಜೂನ್‌ನ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ಬೇಡಿಕೆಯು ಭಾರಿ ಕುಸಿತವನ್ನು ಕಂಡಿತು.[೩] 2009ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನಗಳಲ್ಲಿ 8%ರಷ್ಟು ಕುಸಿತವಾಗಿದ್ದರಿಂದಾಗಿ ಈ ಋಣಾತ್ಮಕ ಪರಿಸ್ಥಿತಿಯು ಮತ್ತಷ್ಟು ತೀವ್ರವಾಯಿತು.[೨] ಇದಾದ ನಂತರ, ಸಾಂಕ್ರಾಮಿಕವಾದ ah1n1 ವೈರಸ್‌ನ ತೀವ್ರಗತಿಯ ಹರಡುವಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಇಳಿಕೆಯ ಪರಿಸ್ಥಿತಿಯು ಉಲ್ಬಣಗೊಂಡಿತು.[೨]


  u.a.e, ಈಜಿಪ್ಟ್‌, ಗ್ರೀಸ್‌ ಮತ್ತು ಥೈಲೆಂಡ್‌ನಂತಹ ಅನೇಕ ದೇಶಗಳು ಮತ್ತು ದಿ ಬಹಮಾಸ್‌, ಫಿಜಿ, ಮಾಲ್ಡೀವ್ಸ್‌ ಮತ್ತು ಸೇಶೆಲ್ಸ್‌ನಂತಹ ಹಲವು ದ್ವೀಪ ರಾಷ್ಟ್ರಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ಪ್ರವಾಸೋದ್ಯಮದೊಂದಿಗೆ ತಳುಕುಹಾಕಿಕೊಂಡಿರುವ ಅವುಗಳ ಸರಕುಗಳು ಮತ್ತು ಸೇವೆಗಳೊಂದಿಗಿನ ವ್ಯವಹಾರಕ್ಕಾಗಿ ಮತ್ತು ಸೇವಾ ಉದ್ಯಮಗಳಲ್ಲಿನ ಉದ್ಯೋಗಾವಕಾಶಕ್ಕಾಗಿ ಬೃಹತ್‌ ಪ್ರಮಾಣದ ಹಣವನ್ನು ಸದರಿ ದೇಶಗಳು ಹೂಡಿರುತ್ತವೆಯಾದ್ದರಿಂದ ಅವುಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ.

  ವಿಮಾನಯಾನ ಸಂಸ್ಥೆಗಳು, ವಿಹಾರ ನೌಕಾಯಾನದ ಹಡಗುಗಳು ಮತ್ತು ಟ್ಯಾಕ್ಸಿಗಳಂತಹ ಸಾರಿಗೆ ಸೇವೆಗಳು; ಹೊಟೇಲುಗಳು ಮತ್ತು ವಿಹಾರಧಾಮಗಳನ್ನೊಳಗೊಂಡ ವಸತಿ ಸೌಕರ್ಯಗಳು, ಮತ್ತು ಮನರಂಜನಾ ಉದ್ಯಾನಗಳು, ಮೋಜು ಮಂದಿರಗಳು, ವ್ಯಾಪಾರ ಕೇಂದ್ರಗಳು, ವಿವಿಧ ಸಂಗೀತ ತಾಣಗಳು ಮತ್ತು ರಂಗಮಂದಿರದಂತಹ ಮನರಂಜನಾ ತಾಣಗಳಂತಹ ಆತಿಥ್ಯ ಸೇವೆಗಳು ಈ ಸೇವಾ ವಲಯಗಳಲ್ಲಿ ಸೇರಿವೆ.
 • ವ್ಯಾಖ್ಯಾನ
 • ವಿಶ್ವ ಪ್ರವಾಸೋದ್ಯಮ ಅಂಕಿಅಂಶಗಳು ಮತ್ತು ಶ್ರೇಯಾಂಕಗಳು
 • ಇತಿಹಾಸ
 • ಇತ್ತೀಚಿನ ಅಭಿವೃದ್ಧಿಗಳು
 • ಅಭಿವೃದ್ಧಿ
 • ಗ್ಯಾಲರಿ
 • ಇದನ್ನೂ ನೋಡಿರಿ
 • ಆಕರಗಳು
 • ಹೊರಗಿನ ಕೊಂಡಿಗಳು

ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ ವಿಶ್ವದ ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡಿದ ದೇಶವಾಗಿದೆ.[2][4]
ದಿ ಅಲ್ಹಾಂಬ್ರಾ, ಗ್ರ್ಯಾನಡಾ, ಸ್ಪೇನ್‌.
ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವಾರ್‌, ಯುನೈಟೆಡ್ ಸ್ಟೇಟ್ಸ್‌.
ಚೀನಾದ ಮಹಾಗೋಡೆ, ಚೀನಾ.
ರೋಮ್‌ನಲ್ಲಿರುವ ಕಲಾಸಿಯಮ್‌, ಇಟಲಿ.
ಲಂಡನ್‌ನಲ್ಲಿರುವ ಟ್ರ್ಯಾಫಲ್ಗರ್‌ ಸ್ಕ್ವಾರ್‌, ಯುನೈಟೆಡ್‌ ಕಿಂಗ್‌ಡಮ್‌.
ಬವರಿಯಾದಲ್ಲಿರುವ ನ್ಯೂಶ್ವೆಸ್ಟೀನ್‌ ಕೋಟೆ, ಜರ್ಮನಿ.
St. ಮೈಕಲ್‌ರ ಚಿನ್ನದ ಗೋಪುರದ ಮಂದಿರ, ಕೀವ್‌, ಉಕ್ರೇನ್‌.
ಹಗೀಯಾ ಸೋಫಿಯಾ, ಇಸ್ತಾಂಬುಲ್‌, ಟರ್ಕಿ.
"ಎಲ್ ಕ್ಯಾಸ್ಟಿಲೋ", ಚಿಚೆನ್ ಇಟ್ಜಾ, ಮೆಕ್ಸಿಕೊ.
ಟೊಕಿಯೊ ಡಿಸ್ನಿಲ್ಯಾಂಡ್‌, ಜಪಾನ್‌.
ವ್ಯೂ ಫ್ರಮ್ ವಿಕ್ಟೋರಿಯಾ ಪೀಕ್‌, ಹಾಂಗ್ ಕಾಂಗ್‌.
ಸಿಡ್ನಿ ಒಪೆರಾ ಹೌಸ್‌, ಸಿಡ್ನಿ, ಆಸ್ಟ್ರೇಲಿಯಾ.
ಈಜಿಪ್ಟ್‌ನಲ್ಲಿರುವ ಗಿಜಾ ಗೋರಿ.
ತಾಜ್ ಮಹಲ್‌, ಆಗ್ರಾ, ಭಾರತ.
ಹಸಿರು ಬಣ್ಣದ ಬುದ್ಧ ದೇವಾಲಯ, ಗ್ರ್ಯಾಂಡ್ ಪ್ಯಾಲೇಸ್‌, ಬ್ಯಾಂಗ್‌ಕಾಕ್‌, ಥೈಲೆಂಡ್‌.

ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿಗರು ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು (24) ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ.[೧] ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ. 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವು ದಾಖಲಾಗಿದ್ದು, 2007ಕ್ಕೆ ಈ ಪ್ರಮಾಣವನ್ನು ಹೋಲಿಸಿದಾಗ 1.9%ರಷ್ಟು ಬೆಳವಣಿಗೆ ಕಂಡಂತಾಗಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ US$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.[೨]


2000ರ ಕೊನೆಯ ಅವಧಿಯಲ್ಲಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಉತ್ತರ ಧ್ರುವದ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಆಗಮನಗಳಲ್ಲಿ 2%ರಷ್ಟು ಕುಸಿಯುವುದರೊಂದಿಗೆ, 2008ರ ಜೂನ್‌ನ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ಬೇಡಿಕೆಯು ಭಾರಿ ಕುಸಿತವನ್ನು ಕಂಡಿತು.[೩] 2009ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನಗಳಲ್ಲಿ 8%ರಷ್ಟು ಕುಸಿತವಾಗಿದ್ದರಿಂದಾಗಿ ಈ ಋಣಾತ್ಮಕ ಪರಿಸ್ಥಿತಿಯು ಮತ್ತಷ್ಟು ತೀವ್ರವಾಯಿತು.[೨] ಇದಾದ ನಂತರ, ಸಾಂಕ್ರಾಮಿಕವಾದ AH1N1 ವೈರಸ್‌ನ ತೀವ್ರಗತಿಯ ಹರಡುವಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಇಳಿಕೆಯ ಪರಿಸ್ಥಿತಿಯು ಉಲ್ಬಣಗೊಂಡಿತು.[೨]


U.A.E, ಈಜಿಪ್ಟ್‌, ಗ್ರೀಸ್‌ ಮತ್ತು ಥೈಲೆಂಡ್‌ನಂತಹ ಅನೇಕ ದೇಶಗಳು ಮತ್ತು ದಿ ಬಹಮಾಸ್‌, ಫಿಜಿ, ಮಾಲ್ಡೀವ್ಸ್‌ ಮತ್ತು ಸೇಶೆಲ್ಸ್‌ನಂತಹ ಹಲವು ದ್ವೀಪ ರಾಷ್ಟ್ರಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ಪ್ರವಾಸೋದ್ಯಮದೊಂದಿಗೆ ತಳುಕುಹಾಕಿಕೊಂಡಿರುವ ಅವುಗಳ ಸರಕುಗಳು ಮತ್ತು ಸೇವೆಗಳೊಂದಿಗಿನ ವ್ಯವಹಾರಕ್ಕಾಗಿ ಮತ್ತು ಸೇವಾ ಉದ್ಯಮಗಳಲ್ಲಿನ ಉದ್ಯೋಗಾವಕಾಶಕ್ಕಾಗಿ ಬೃಹತ್‌ ಪ್ರಮಾಣದ ಹಣವನ್ನು ಸದರಿ ದೇಶಗಳು ಹೂಡಿರುತ್ತವೆಯಾದ್ದರಿಂದ ಅವುಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ.

ವಿಮಾನಯಾನ ಸಂಸ್ಥೆಗಳು, ವಿಹಾರ ನೌಕಾಯಾನದ ಹಡಗುಗಳು ಮತ್ತು ಟ್ಯಾಕ್ಸಿಗಳಂತಹ ಸಾರಿಗೆ ಸೇವೆಗಳು; ಹೊಟೇಲುಗಳು ಮತ್ತು ವಿಹಾರಧಾಮಗಳನ್ನೊಳಗೊಂಡ ವಸತಿ ಸೌಕರ್ಯಗಳು, ಮತ್ತು ಮನರಂಜನಾ ಉದ್ಯಾನಗಳು, ಮೋಜು ಮಂದಿರಗಳು, ವ್ಯಾಪಾರ ಕೇಂದ್ರಗಳು, ವಿವಿಧ ಸಂಗೀತ ತಾಣಗಳು ಮತ್ತು ರಂಗಮಂದಿರದಂತಹ ಮನರಂಜನಾ ತಾಣಗಳಂತಹ ಆತಿಥ್ಯ ಸೇವೆಗಳು ಈ ಸೇವಾ ವಲಯಗಳಲ್ಲಿ ಸೇರಿವೆ.
Other Languages
Afrikaans: Toerisme
አማርኛ: ጉዞ (ቱሪዝም)
aragonés: Torismo
العربية: سياحة
مصرى: سياحة
অসমীয়া: পৰ্যটন
asturianu: Turismu
azərbaycanca: Turizm
башҡортса: Туризм
беларуская: Турызм
беларуская (тарашкевіца)‎: Турызм
български: Туризъм
भोजपुरी: पर्यटन
বাংলা: পর্যটন
brezhoneg: Touristerezh
bosanski: Turizam
català: Turisme
Cebuano: Turismo
کوردی: گەشتیاری
čeština: Turistika
Cymraeg: Twristiaeth
dansk: Turisme
Deutsch: Tourismus
Zazaki: Turizm
Ελληνικά: Τουρισμός
English: Tourism
Esperanto: Turismo
español: Turismo
eesti: Turism
euskara: Turismo
فارسی: گردشگری
suomi: Matkailu
Võro: Turism
føroyskt: Ferðavinna
français: Tourisme
Nordfriisk: Fräämenferkiar
furlan: Turisim
Frysk: Toerisme
kriyòl gwiyannen: Tourism
Gàidhlig: Turasachd
galego: Turismo
ગુજરાતી: પર્યટન
Gaelg: Turrysaght
Hawaiʻi: Ōlʻiaimi
עברית: תיירות
हिन्दी: पर्यटन
hrvatski: Turizam
Kreyòl ayisyen: Touris
magyar: Turizmus
հայերեն: Տուրիզմ
interlingua: Tourismo
Bahasa Indonesia: Pariwisata
Interlingue: Turisme
Ido: Turismo
íslenska: Ferðamennska
italiano: Turismo
日本語: 観光
ქართული: ტურიზმი
қазақша: Туризм
ភាសាខ្មែរ: ទេសចរណ៍
한국어: 관광
kurdî: Turîzm
Кыргызча: Туризм
Latina: Periegesis
Lëtzebuergesch: Tourismus
Lingua Franca Nova: Turisme
Limburgs: Toerisme
lietuvių: Turizmas
latviešu: Tūrisms
मैथिली: पर्यटन
македонски: Туризам
монгол: Жуулчлал
मराठी: पर्यटन
Bahasa Melayu: Pelancongan
Napulitano: Turismo
Nedersaksies: Toerisme
नेपाली: पर्यटन
नेपाल भाषा: पर्यटन
Nederlands: Toerisme
norsk nynorsk: Turisme
norsk: Turisme
Nouormand: Tourisme
occitan: Torisme
ਪੰਜਾਬੀ: ਸੈਰ-ਸਪਾਟਾ
Papiamentu: Turismo
Norfuk / Pitkern: Tuurism
polski: Turystyka
português: Turismo
Runa Simi: Karu puriy
română: Turism
armãneashti: Turizmo
русский: Туризм
русиньскый: Туристика
संस्कृतम्: पर्यटनम्
саха тыла: Туризм
sardu: Turismu
sicilianu: Turismu
Scots: Tourism
srpskohrvatski / српскохрватски: Turizam
Simple English: Tourism
slovenčina: Turistika
slovenščina: Turizem
shqip: Turizmi
српски / srpski: Туризам
svenska: Turism
Kiswahili: Utalii
தமிழ்: சுற்றுலா
Türkmençe: Turizm
Tagalog: Turismo
Tok Pisin: Turisim
Türkçe: Turizm
татарча/tatarça: Туризм
українська: Туризм
اردو: سیاح
oʻzbekcha/ўзбекча: Turizm
vèneto: Torismo
Tiếng Việt: Du lịch
walon: Tourisse
Winaray: Turismo
吴语: 旅游
მარგალური: ტურიზმი
ייִדיש: טוריזם
Zeêuws: Toerisme
中文: 旅游
Bân-lâm-gú: Koan-kong
粵語: 旅遊