ಗ್ಲೊಕೊಮಾ

ಗಟ್ಟಿಗಣ್ಣು ಅಥವಾ ಗ್ಲೊಕೋಮಾ ಕಣ್ಣಿನ ಒಂದು ಗಂಭೀರವಾದ ಕಾಯಿಲೆ. ಸ್ಥೂಲವಾಗಿ ಹೇಳುವುದಾದರೆ ಇದರಲ್ಲಿ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗುತ್ತದೆ. ಈ ಕಾಯಿಲೆ ಗಂಭೀರವಾಗಲು ಕಾರಣವೇನೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆಯ ಇರುವು ಗೊತ್ತಾಗುವ ಹೊತ್ತಿಗೆ ಕಣ್ಣಿನ ನರವಾದ ಆಪ್ಟಿಕ್ ನರಕ್ಕೆ ಬಹಳಷ್ಟು ತೊಂದರೆ ಉಂಟಾಗಿರುತ್ತದೆ. ಅಲ್ಲದೇ ಕಾಯಿಲೆಯಿಂದ ಹಾಳಾದ ನರವನ್ನು ಮತ್ತೆ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕಾಯಿಲೆಯಿಂದ ನಾಶವಾದ ದೃಷ್ಟಿ ಮತ್ತೇ ಪುನಃ ಬರುವ ಸಾಧ್ಯತೆ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೋವು ವೇದನೆ ಇಲ್ಲದಿರುವುದರಿಂದ ರೋಗಿ ಕಣ್ಣಿನ ಪೊರೆ ಎಂದು ತಿಳಿದು ವೈದ್ಯರಲ್ಲಿ ಬರುವುದನ್ನು ಮುಂದೆ ಹಾಕುತ್ತಾನೆ.

ಸಮಸ್ಯೆಯ ಅಗಾಧತೆ

ನಮ್ಮ ದೇಶದಲ್ಲಿ ಗ್ಲೊಕೊಮಾದ ಸಮಸ್ಯೆ ಹೆಚ್ಚಿರಲು ಕಾರಣ ಬಡತನ. ಅಜ್ಞಾನ ಮತ್ತು ಅಸಮರ್ಪಕ ಆರೋಗ್ಯ ವ್ಯವಸ್ಥೆ. ಒಂದು ಅಂದಾಜಿನ ಪ್ರಕಾರ ಕಣ್ಣಿನ ಆಸ್ಪತ್ರೆಗೆ ಭೇಟಿ ಕೊಡುವ ಪ್ರತಿ ಹತ್ತರಲ್ಲಿ ಒಬ್ಬರಿಗೆ ಗ್ಲೊಕೊಮಾ ಇದೆ ಮತ್ತು ನೂರರಲ್ಲಿ ಒಬ್ಬರು ಈ ಕಾಯಿಲೆಯಿಂದ ಅಂಧರಾಗುತ್ತಾರೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಕೈಗೊಂಡ ಸಮೀಕ್ಷೆಯ ಪ್ರಕಾರ ಗ್ಲೊಕೊಮಾವು 14-25% ಸಂದರ್ಭಗಳಲ್ಲಿ ಕಾರಣವಾಗಿರುತ್ತದೆ. ಆದರೆ ಮುಂದುವರಿದ ದೇಶಗಳಾದ ಅಮೆರಿಕ, ಇಂಗ್ಲೆಂಡ್‍ಗಳಲ್ಲಿ ಈ ಪ್ರಮಾಣ 12-13%.

ದೇಹದಲ್ಲಿ ರಕ್ತ ಒತ್ತಡ ಇರುವ ಹಾಗೆಯೇ ಕಣ್ಣಿಗೂ ಒಂದು ನಿರ್ದಿಷ್ಟ ಒತ್ತಡ ಇರುತ್ತದೆ. ಸಾಮಾನ್ಯವಾಗಿ ಕಣ್ಣಿನ ಒತ್ತಡ 10ರಿಂದ 20 ಮಿಮೀ(ಪಾದರಸ) ಇರುತ್ತದೆ. ಈ ಅಂಕಿಗಿಂತ ಒತ್ತಡ ಹೆಚ್ಚಾದಾಗ ಗ್ಲೊಕೊಮಾ ಇರಬಹುದೇ ಎಂದು ನೇತ್ರವೈದ್ಯ ಅನುಮಾನಿಸುವುದು ಸಹಜ. ಕಣ್ಣಿನ ಒತ್ತಡ ಒತ್ತಡಮಾಪಕ ಯಂತ್ರದಿಂದ ಅಳೆಯಲ್ಪಡುತ್ತದೆ.

Other Languages
العربية: ماء أزرق
azərbaycanca: Qlaukoma
беларуская: Глаўкома
български: Глаукома
বাংলা: গ্লুকোমা
bosanski: Glaukom
català: Glaucoma
čeština: Glaukom
Cymraeg: Glawcoma
Deutsch: Glaukom
Ελληνικά: Γλαύκωμα
English: Glaucoma
Esperanto: Glaŭkomo
español: Glaucoma
eesti: Glaukoom
euskara: Glaukoma
فارسی: آب‌سیاه
suomi: Glaukooma
français: Glaucome
Gaeilge: Glácóma
עברית: גלאוקומה
हिन्दी: कांचबिंदु
hrvatski: Glaukom
Հայերեն: Գլաուկոմա
interlingua: Glaucoma
Bahasa Indonesia: Glaukoma
íslenska: Gláka
italiano: Glaucoma
日本語: 緑内障
қазақша: Суқараңғы
한국어: 녹내장
Latina: Glaucoma
lietuvių: Glaukoma
latviešu: Glaukoma
македонски: Глауком
മലയാളം: ഗ്ലോക്കോമ
मराठी: काचबिंदू
Bahasa Melayu: Glaukoma
नेपाली: जलबिन्दु
Nederlands: Glaucoom
norsk: Glaukom
ଓଡ଼ିଆ: ଗ୍ଲକୋମା
Papiamentu: Gloucoma
polski: Jaskra
Piemontèis: Glaucòma
português: Glaucoma
română: Glaucom
русский: Глаукома
саха тыла: Глаукома
Scots: Glaucoma
srpskohrvatski / српскохрватски: Glaukom
Simple English: Glaucoma
slovenčina: Zelený zákal
slovenščina: Glavkom
српски / srpski: Глауком
svenska: Glaukom
Türkçe: Glokom
татарча/tatarça: Глаукома
українська: Глаукома
oʻzbekcha/ўзбекча: Glaukoma
Tiếng Việt: Cườm nước
中文: 青光眼
粵語: 青光眼