ಕನ್ಫ್ಯೂಷಿಯಸ್ |
ಕನ್ಫ್ಯೂಷಿಯಸ್[೧] (
ಚೀನೀ ಭಾಷೆಯ ಹಲವು ಮೇರು ಕೃತಿಗಳನ್ನು ರಚಿಸಿರುವ ಹಾಗು ಸಂಪಾದಿಸಿರುವ ಹೆಗ್ಗಳಿಕೆ ಕನ್ಫ್ಯೂಷಿಯಸ್ ಅವರಿಗೆ ಸಲ್ಲುತ್ತದೆ. ಅವರ ಬೋಧನೆ ಗಳನ್ನು ಅವರ ಮರಣದ ನಂತರ "ಅನಲೆಕ್ಟೆಸ್" ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.
ಕನ್ಫ್ಯೂಷಿಯಸ್ ತತ್ವಗಳು ಮೂಲತಃ ಚೀನೀ ಸಂಪ್ರದಾಯ ಹಾಗು ನಂಬಿಕೆ ಗಳಿಗೆ ಸೇರಿವೆ. ಅವರ ಬೋಧನೆಗಳು ಕೌಟುಂಬಿಕ ನಿಷ್ಠೆ, ಪೂರ್ವಿಕರ ಆರಾಧನೆ, ಮಕ್ಕಳಿಂದ ತಮ್ಮ ಹಿರಿಯರಿಗೆ ಗೌರವ, ಸತಿಯರಿಗೆ ತಮ್ಮ ಪತಿಯ ಮೇಲೆ ಗೌರವದ ಕುರಿತಾಗಿರುತ್ತಿದವು. ಒಂದು ಒಳ್ಳೆ ಸರ್ಕಾರಕ್ಕೆ ಕುಟುಂಬವೇ ಮೂಲ ಎಂಬ ಅಭಿಪ್ರಾಯ ಉಳ್ಳವರಾಗಿದ್ದರು. "ನಿನಗೆ ಬೇರೆಯವರು ಏನು ಮಾಡಬಾರದೆಂದು ಬಯಸುವೆಯೊ, ಅದನ್ನು ನೀನು ಬೇರೆಯವರಿಗೆ ಮಾಡಬೇಡ" ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಹಾಗು ಇದು ಅವರ ಸುವರ್ಣ ನಿಯಮವು ಹೌದು.
ಕನ್ಫ್ಯೂಷಿಯಸ್ ರವರ ಕೌಟುಂಬಿಕ ಹಾಗು ವೈಯಕ್ತಿಕ ಹೆಸರು ಕೊಂಗ್ ಕಿಯು. ಇದಕ್ಕೆ ಪೂರಕವಾದ ಹೆಸರೆಂದರೆ ಜ್ಹೊಂಗ್ನಿ. ಚೀನೀಸ್ ಭಾಷೆಯಲ್ಲಿ ಖೊಂಗ್ಶಿ, ಅರ್ಥ ಮಾಸ್ಟರ್ ಕೊಂಗ್ ಎಂದು. ಕೊಂಗ್ ಫ಼ುಜ಼ಿ ಅರ್ಥ ಗ್ರಾಂಡ್ ಮಾಸ್ಟರ್ ಕೊಂಗ್ ಎಂದೂ ಕರೆಯಲಾಗುವುದು. ರೋಮನೀಕರಣದ ವೇಡ್ ಗೈಲ್ಸ್ ವ್ಯವಸ್ಥೆಯಲ್ಲಿ ಇವರ ಹೆಸರನ್ನು ಕುಂಗ್ ಫ಼ುಟ್ಸು ಎಂದು ನಿರೂಪಿಸಲಾಗಿದೆ. ಲ್ಯಾಟಿನ್ ಹೆಸರಾದ "ಕನ್ಫ್ಯೂಷಿಯಸ್", "ಕೊಂಗ್ ಫ಼ುಜ಼ಿ" ಎಂಬ ಹೆಸರಿನಿಂದ ಹುಟ್ಟಿಕೊಂಡಿದೆ. ಈ ಹೆಸರನ್ನು ಮೊದಲನೆಯ ಬಾರಿಗೆ ಮ್ಯಟ್ಟಿಯೊ ರಿಕ್ಕಿ ಎಂಬ ೧೬ ನೇ ಶತಮಾನದ ಕ್ರೈಸ್ತ ಪಾದ್ರಿ ಬಳಸಿದರು.
ಅನಲೆಕ್ಟೆಸ್ ಪುಸ್ತಕದಲ್ಲಿ, ಕನ್ಫ್ಯೂಷಿಯಸ್ ರವರನ್ನು "ದಿ ಮಾಸ್ಟರ್" ಎಂದು ನಮೂದಿಸಲಾಗಿದೆ. ಕ್ರಿ.ಶ. ೧ ರಲ್ಲಿಅವರಿಗೆ "ಲೌಡೆಬ್ಲಿ ಡೆಕ್ಲಾರಬಲ್ ಲಾರ್ಡ್ ನಿ" ಎಂದು ಮೊದಲನೆಯ ಮರಣೋತ್ತರ ಹೆಸರು ನೀಡಲಾಯಿತು. ೧೫೩೦ ರಲ್ಲಿ ಅವರನ್ನು "ಎಕ್ಸ್ಟೀಮ್ಲ್ಯ್ ಸೇಜ್ ಡಿಪಾರ್ಟೆಡ್ ಟೀಚರ್" ಎಂದು ಘೋಷಿಸಲಾಯಿತು. ಇದನ್ನು ಹೊರೆತು ಪಡಿಸಿ ಅವರನ್ನು ಮಹಾನ್ ಋಷಿ, ಮೊದಲನೆಯ ಗುರು ಹಾಗು ಹತ್ತು ಸಾವಿರ ಕಾಲಾಂತರಕ್ಕೆ ಮಾದರಿ ಗುರು ಎಂದೂ ಕರೆಯಲಾಗುತ್ತದೆ.