ಉತ್ತರ ಐರ್ಲೆಂಡ್‌‌

Tuaisceart Éireann
Norlin Airlann

Northern Ireland
[[Image:
ಕರೆನ್ಸಿPound sterling (GBP)
ಸಮಯ ವಲಯGMT (UTC+0)
 - ಬೇಸಿಗೆ (DST)BST (UTC+1)
ಅಂತರ್ಜಾಲ TLD.uk2
ದೂರವಾಣಿ ಕೋಡ್++443

ಉತ್ತರ ಐರ್ಲೆಂಡ್ (ಐರಿಷ್:Tuaisceart Éireann, ಅಲ್ಸ್ಟರ್ ಸ್ಕಾಟ್ಸ್: ನಾರ್ಲಿನ್ ಏರ್ಲನ್ನ್ ) ಯುನೈಟೆಡ್ ಕಿಂಗ್ಡಮ್ ನ ನಾಲ್ಕು ರಾಷ್ಟ್ರಗಳಲ್ಲಿ ಒಂದಾಗಿದೆ.[೨][೩] ಐರ್ಲೆಂಡ್‌‌ ನ ದ್ವೀಪದ ಈಶಾನ್ಯ ಭಾಗದಲ್ಲಿ ನೆಲೆಯಾಗಿರುವ ಇದು, ದಕ್ಷಿಣ ಹಾಗು ಪಶ್ಚಿಮಕ್ಕೆ ರಿಪಬ್ಲಿಕ್ ಆಫ್ ಐರ್ಲೆಂಡ್ ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. 2001 UK ಜನಗಣತಿಯ ಸಮಯದಲ್ಲಿ ಇದು 1,685,000ರಷ್ಟು ಜನಸಂಖ್ಯೆ ಹೊಂದಿತ್ತು, ಇದರಲ್ಲಿ ದ್ವೀಪದ ಒಟ್ಟಾರೆ ಜನಸಂಖ್ಯೆಯು ಸುಮಾರು 30% ಹಾಗು ಯುನೈಟೆಡ್ ಕಿಂಗ್ಡಮ್ ಜನಸಂಖ್ಯೆಯಲ್ಲಿ ಸುಮಾರು 3%ನಷ್ಟು ಸೇರಿದೆ.ಅಲ್ಸ್ಟರ್ ನ ಐರಿಶ್ ಪ್ರಾಂತದ ಒಂಬತ್ತು ಕೌಂಟಿಗಳಲ್ಲಿ ಆರನ್ನು ಉತ್ತರ ಐರ್ಲೆಂಡ್‌‌ ಒಳಗೊಂಡಿದೆ. ಯುನೈಟೆಡ್ ಕಿಂಗ್ಡಮ್ ವಿಭಾಗದ ಒಂದು ವಿಶಿಷ್ಟ ಪ್ರದೇಶವಾಗಿ 3 ಮೇ 1921ರಲ್ಲಿ ಗವರ್ನಮೆಂಟ್ ಆಫ್ ಐರ್ಲೆಂಡ್ ಆಕ್ಟ್ 1920 ಇದನ್ನು ಸೃಷ್ಟಿಸಿತು.[೪] ಆದಾಗ್ಯೂ ಇದರ ಸಾಂವಿಧಾನಿಕ ಮೂಲಗಳು ಗ್ರೇಟ್ ಬ್ರಿಟನ್ ಹಾಗು ಐರ್ಲೆಂಡ್‌‌ ನಡುವೆ 1800ರಲ್ಲಿ ನಡೆದ ಆಕ್ಟ್ ಆಫ್ ಯೂನಿಯನ್ ಅನ್ನು ಆಧರಿಸಿವೆ. 50 ವರ್ಷಗಳಿಗೂ ಮಿಗಿಲಾಗಿ ಇದು ತನ್ನದೇ ಆದ ಪರಂಪರಾಗತ ಆಡಳಿತ ವ್ಯವಸ್ಥೆ ಹಾಗು ಸಂಸತ್ತನ್ನು ಹೊಂದಿತ್ತು. ಈ ಪದ್ದತಿಗಳನ್ನು 1972ರಲ್ಲಿ ಅಮಾನತುಗೊಳಿಸುವುದರ ಜೊತೆಗೆ 1973ರಲ್ಲಿ ರದ್ದುಪಡಿಸಲಾಯಿತು. ಸ್ವಯಮಾಡಳಿತವನ್ನು ಮತ್ತೆ ಸ್ಥಾಪಿಸಬೇಕೆಂಬ ಸತತ ಪ್ರಯತ್ನಗಳು ಅಂತಿಮವಾಗಿ ಇಂದಿನ ಉತ್ತರ ಐರ್ಲೆಂಡ್ ಎಕ್ಸಿಕ್ಯುಟಿವ್(ಕಾರ್ಯಾಂಗ) ಹಾಗು ಉತ್ತರ ಐರ್ಲೆಂಡ್ ಅಸೆಂಬ್ಲಿಯ ಸ್ಥಾಪನೆಗೆ ಕಾರಣವಾದವು. ಅಸೆಂಬ್ಲಿಯು, ವಿಭಿನ್ನ ಸಮುದಾಯಗಳ ಬೆಂಬಲ ಅಗತ್ಯವಿರುವ ಸಹಯೋಗ ಪ್ರಜಾಪ್ರಭುತ್ವ ಸೂತ್ರಗಳನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತದೆ.ಉತ್ತರ ಐರ್ಲೆಂಡ್‌‌, ಹಲವು ವರ್ಷಗಳ ಕಾಲ ಹಿಂಸಾಚಾರ ಹಾಗು ತೀವ್ರವಾದ ಜನಾಂಗೀಯ-ರಾಜಕೀಯ ಘರ್ಷಣೆಗಳ ಸ್ಥಳವೆನಿಸಿತ್ತು - ಬಿಕ್ಕಟ್ಟುಗಳನ್ನು - ರಾಷ್ಟ್ರೀಯತಾವಾದಿ ಪಕ್ಷದಲ್ಲಿ ಪ್ರಬಲವಾಗಿದ್ದ ರೋಮನ್ ಕ್ಯಾಥೊಲಿಕ್ ರು ಹಾಗು ಯೂನಿಯನಿಸ್ಟ್ ಪಕ್ಷದಲ್ಲಿ ಪ್ರಬಲವಾಗಿದ್ದ ಪ್ರಾಟೆಸ್ಟನ್ಟ್ ಗಳು ಸೃಷ್ಟಿಸಿದರು. ಯೂನಿಯನಿಸ್ಟ್ ಗಳು(ಏಕೀಕರಣವಾದಿಗಳು), ಉತ್ತರ ಐರ್ಲೆಂಡ್ ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿಯೇ ಉಳಿಯಬೇಕೆಂದು ವಾದಿಸಿದರೆ,[೫] ರಾಷ್ಟ್ರೀಯತಾವಾದಿಗಳು ಬ್ರಿಟಿಶ್ ಆಡಳಿತದಿಂದ ಮುಕ್ತಗೊಂಡು ಉಳಿದ ಐರ್ಲೆಂಡ್ ನೊಂದಿಗೆ ರಾಜಕೀಯವಾಗಿ ಒಂದುಗೂಡಬೇಕೆಂದು ಬಯಸಿದರು.[೬][೭][೮][೯] 1998ರಲ್ಲಿ ಸಹಿ ಹಾಕಲಾದ "ಗುಡ್ ಫ್ರೈಡೆ ಅಗ್ರಿಮೆಂಟ್" ನ ತರುವಾದ, ಬಿಕ್ಕಟ್ಟಿನಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಅರೆಸೈನಿಕ ಗುಂಪುಗಳು ತಮ್ಮ ಸಶಸ್ತ್ರ ಕಾರ್ಯಾಚರಣೆಯನ್ನು ಕೈಬಿಟ್ಟವು.ತನ್ನ ಅಪರೂಪದ ಇತಿಹಾಸದ ಕಾರಣದಿಂದ, ಸಂಕೇತಗಳ ಬಗ್ಗೆ ವಿವಾದಾಂಶ, ಉತ್ತರ ಐರ್ಲೆಂಡ್‌‌ ನ ಹೆಸರು ಹಾಗು ಅದರ ವಿವರಣೆಯು ಸಂಕೀರ್ಣವಾಗಿದೆ, ಹಾಗು ಇದೇ ರೀತಿಯಾಗಿ ಪೌರತ್ವ ಹಾಗು ಸ್ವಸ್ವರೂಪವೂ ಸಹ ಇದಕ್ಕೆ ಹೊರತಾಗಿಲ್ಲ. ಸಾಧಾರಣವಾಗಿ, ಯೂನಿಯನಿಸ್ಟ್ ಗಳು ತಮ್ಮನ್ನು ತಾವು ಬ್ರಿಟಿಶ್ ಎಂದು ಪರಿಗಣಿಸಿದರೆ ರಾಷ್ಟ್ರೀಯತಾವಾದಿಗಳು ತಮ್ಮನ್ನು ತಾವು ಐರಿಶ್ ಎಂದು ಘೋಷಿಸಿಕೊಳ್ಳುತ್ತಾರೆ, ಆದಾಗ್ಯೂ ಈ ಸ್ವಸ್ವರೂಪಗಳು ಅತ್ಯವಶ್ಯವಾಗಿ ಪರಸ್ಪರ ಏಕನಿಷ್ಠವಲ್ಲ.

ಪರಿವಿಡಿ

Other Languages
Afrikaans: Noord-Ierland
Alemannisch: Nordirland
azərbaycanca: Şimali İrlandiya
башҡортса: Төньяҡ Ирландия
Boarisch: Noadirland
Bikol Central: Irlandya nin Norte
беларуская (тарашкевіца)‎: Паўночная Ірляндыя
brezhoneg: Norzhiwerzhon
bosanski: Sjeverna Irska
Chavacano de Zamboanga: Irlanda del Norte
Mìng-dĕ̤ng-ngṳ̄: Báe̤k Ireland
čeština: Severní Irsko
dansk: Nordirland
Deutsch: Nordirland
dolnoserbski: Pódpołnocna Irska
Esperanto: Nord-Irlando
euskara: Ipar Irlanda
estremeñu: Irlanda del Norti
føroyskt: Norðurírland
français: Irlande du Nord
Nordfriisk: Nuurdirlun
Gàidhlig: Èirinn a Tuath
गोंयची कोंकणी / Gõychi Konknni: उत्तर आयर्लंड
客家語/Hak-kâ-ngî: Pet Ireland
hrvatski: Sjeverna Irska
hornjoserbsce: Sewjerna Irska
Kreyòl ayisyen: Ilann dinò
interlingua: Irlanda del Nord
Bahasa Indonesia: Irlandia Utara
Interlingue: Nord-Irland
íslenska: Norður-Írland
ភាសាខ្មែរ: អៀរឡង់ខាងជើង
한국어: 북아일랜드
kernowek: Wordhen Gledh
Lëtzebuergesch: Nordirland
Lingua Franca Nova: Er Norde
Limburgs: Noord-Ierland
lietuvių: Šiaurės Airija
latviešu: Ziemeļīrija
македонски: Северна Ирска
Bahasa Melayu: Ireland Utara
مازِرونی: شمالی ایرلند
Napulitano: Irlanna d'o Nord
Nedersaksies: Noord-Ierlaand
Nederlands: Noord-Ierland
norsk nynorsk: Nord-Irland
Nouormand: Irlande du Nord
Piemontèis: Irlanda dël Nòrd
português: Irlanda do Norte
Runa Simi: Chinchay Ilanda
rumantsch: Irlanda dal Nord
romani čhib: Nordutno Irland
română: Irlanda de Nord
armãneashti: Irlanda di Aratsile
sicilianu: Irlanna dû Nord
srpskohrvatski / српскохрватски: Sjeverna Irska
Simple English: Northern Ireland
slovenčina: Severné Írsko
slovenščina: Severna Irska
Soomaaliga: Waqooyiga Ayrland
српски / srpski: Северна Ирска
Seeltersk: Noudirlound
Basa Sunda: Irlandia Kalér
svenska: Nordirland
Tok Pisin: Noten Aialan
Türkçe: Kuzey İrlanda
татарча/tatarça: Төньяк Ирландия
українська: Північна Ірландія
oʻzbekcha/ўзбекча: Shimoliy Irlandiya
Tiếng Việt: Bắc Ireland
吴语: 北爱尔兰
Zeêuws: Noord-Ierland
中文: 北爱尔兰
Bân-lâm-gú: Pak Ài-ní-lân
粵語: 北愛爾蘭